Kalpavruksha Kshetra

|| Moolaramo Vijayate ||

|| Gururajo Vijayate ||

Kalpavruksha Kshetra - Sri Raghavendra Swamy Mutt

Kalpavruksha Kshetra
Sri Raghavendra Swamy Mutt

Mysuru

Shlokas Testing

Read More
Loading...

ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ
ಕಾಮಾರಿಮಾಕ್ಷವಿಷಮಾಕ್ಷಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತತರಂಗಚರತ್ಸುಹಂಸಾ
ದೇವಾಳಿಸೇವಿತಪರಾಂಘ್ರಿಪಯೋಜಲಗ್ನಾ || ೧ ||

ಜೀವೇಶಭೇದಗುಣಪೂರ್ತಿಜಗತ್ಸುಸತ್ತ್ವ
ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ |
ದುರ್ವಾದ್ಯಜಾಪತಿಗಿಳೈಃ ಗುರುರಾಘವೇಂದ್ರ
ವಾಗ್ದೇವತಾಸರಿದಮುಂ ವಿಮಲೀ ಕರೋತು || ೨ ||

ಶ್ರೀರಾಘವೇಂದ್ರಃ ಸಕಲಪ್ರದಾತಾ
ಸ್ವಪಾದಕಂಜದ್ವಯಭಕ್ತಿಮದ್ಭ್ಯಃ |
ಅಘಾದ್ರಿಸಂಭೇದನದೃಷ್ಟಿವಜ್ರಃ
ಕ್ಷಮಾಸುರೇಂದ್ರೋಽವತು ಮಾಂ ಸದಾಽಯಮ್ || ೩ ||

ಶ್ರೀರಾಘವೇಂದ್ರೋ ಹರಿಪಾದಕಂಜ-
ನಿಷೇವಣಾಲ್ಲಬ್ಧಸಮಸ್ತಸಮ್ಪತ್ |
ದೇವಸ್ವಭಾವೋ ದಿವಿಜದ್ರುಮೋಽಯಮ್
ಇಷ್ಟಪ್ರದೋ ಮೇ ಸತತಂ ಸ ಭೂಯಾತ್ || ೪ ||

ಭವ್ಯಸ್ವರೂಪೋ ಭವದುಃಖತೂಲ-
ಸಂಘಾಗ್ನಿಚರ್ಯಃ ಸುಖಧೈರ್ಯಶಾಲೀ |
ಸಮಸ್ತದುಷ್ಟಗ್ರಹನಿಗ್ರಹೇಶೋ
ದುರತ್ಯಯೋಪಪ್ಲವಸಿಂಧುಸೇತುಃ || ೫ ||

ನಿರಸ್ತದೋಷೋ ನಿರವದ್ಯವೇಷಃ
ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ |
ವಿದ್ವತ್ಪರಿಜ್ಞೇಯಮಹಾವಿಶೇಷೋ
ವಾಗ್ವೈಖರೀನಿರ್ಜಿತಭವ್ಯಶೇಷಃ || ೬ ||

ಸಂತಾನಸಮ್ಪತ್ಪರಿಶುದ್ಧಭಕ್ತಿ-
ವಿಜ್ಞಾನವಾಗ್ದೇಹಸುಪಾಟವಾದೀನ್ |
ದತ್ತ್ವಾ ಶರೀರೋತ್ಥಸಮಸ್ತದೋಷಾನ್
ಹತ್ತ್ವಾ ಸ ನೋಽವ್ಯಾದ್ಗುರುರಾಘವೇಂದ್ರಃ || ೭ ||

ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ-
ಸಂಖ್ಯಾಽನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತಪುಣ್ಯಾವಹಃ |
ದುಸ್ತಾಪತ್ರಯನಾಶನೋ ಭುವಿ ಮಹಾ ವಂಧ್ಯಾಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ || ೮ ||

ಯತ್ಪಾದಕಂಜರಜಸಾ ಪರಿಭೂಷಿತಾಂಗಾ
ಯತ್ಪಾದಪದ್ಮಮಧುಪಾಯಿತಮಾನಸಾ ಯೇ |
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ
ಸ್ತದ್ದರ್ಶನಂ ದುರಿತಕಾನನದಾವಭೂತಮ್ || ೯ ||

ಸರ್ವತಂತ್ರಸ್ವತಂತ್ರೋಽಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |
ಶ್ರೀರಾಘವೇಂದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಹಃ |
ಜ್ಞಾನಭಕ್ತಿಸುಪುತ್ರಾಯುಃ ಯಶಃ ಶ್ರೀಃ ಪುಣ್ಯವರ್ಧನಃ || ೧೦ ||

ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ |
ಸರ್ವವಿದ್ಯಾಪ್ರವೀಣೋಽನ್ಯೋ ರಾಘವೇಂದ್ರಾನ್ನವಿದ್ಯತೇ || ೧೧ ||

ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾಽನ್ಯೋ ರಾಘವೇಂದ್ರಾನ್ನವಿದ್ಯತೇ || ೧೨ ||

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |
ಶಾಪಾನುಗ್ರಹಶಕ್ತೋಽನ್ಯೋ ರಾಘವೇಂದ್ರಾನ್ನವಿದ್ಯತೇ || ೧೩ ||

ಅಜ್ಞಾನವಿಸ್ಮೃತಿಭ್ರಾಂತಿಸಂಶಯಾಽಪಸ್ಮೃತಿಕ್ಷಯಾಃ |
ತಂದ್ರಾಕಮ್ಪವಚಃಕೌಣ್ಠ್ಯಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ || ೧೪ ||

ಓಂ ಶ್ರೀರಾಘವೇಂದ್ರಾಯ ನಮಃ ಇತ್ಯಽಷ್ಟಾಕ್ಷರಮಂತ್ರತಃ |
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ ಸ್ಯುರ್ನಸಂಶಯಃ || ೧೫ ||

ಹಂತು ನಃ ಕಾಯಜಾನ್ದೋಷಾನಾತ್ಮಾತ್ಮೀಯಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ || ೧೬ ||

ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೭ ||

ಅಗಮ್ಯಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಾಃ |
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋಽವತು ಸದಾಽನಘಃ || ೧೮ ||

ಸರ್ವಯಾತ್ರಾಫಲಾವಾಪ್ತ್ಯೈ ಯಥಾಶಕ್ತಿಪ್ರದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ಬೃಂದಾವನಗತಂ ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ತಯೇ || ೧೯ ||

ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ || ೨೦ ||

ಸಂಸಾರೇಽಕ್ಷಯಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ |
ಸರ್ವಾವದ್ಯಜಲಗ್ರಹೈರನುಪಮೈಃ ಕಾಮಾದಿಭಂಗಾಕುಲೇ |
ನಾನಾವಿಭ್ರಮದುರ್ಭ್ರಮೇಽಮಿತಭಯಸ್ತೋಮಾದಿಫೇನೋತ್ಕಟೇ |
ದುಃಖೋತ್ಕೃಷ್ಟವಿಷೇ ಸಮುದ್ಧರ ಗುರೋ ಮಾ ಮಗ್ನರೂಪಂ ಸದಾ || ೨೧ ||

ರಾಘವೇಂದ್ರ ಗುರು ಸ್ತೋತ್ರಂ ಯಃ ಪಠೇದ್ಭಕ್ತಿಪೂರ್ವಕಮ್ |
ತಸ್ಯ ಕುಷ್ಠಾದಿರೋಗಾಣಾಂ ನಿವೃತ್ತಿಸ್ತ್ವರಯಾ ಭವೇತ್ || ೨೨ ||

ಅಂಧೋಽಪಿ ದಿವ್ಯದೃಷ್ಟಿಃ ಸ್ಯಾದೇಡಮೂಕೋಽಪಿ ವಾಕ್ಪತಿಃ |
ಪೂರ್ಣಾಯುಃ ಪೂರ್ಣಸಮ್ಪತ್ತಿಃ ಸ್ತೋತ್ರಸ್ಯಾಽಸ್ಯ ಜಪಾದ್ಭವೇತ್ || ೨೩ ||

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿಮಂತ್ರಿತಮ್ |
ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯಂತಿ ತತ್ ಕ್ಷಣಾತ್ || ೨೪ ||

ಯದ್ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ಪ್ರದಕ್ಷಿಣನಮಸ್ಕೃತಿ |
ಸ ಜಂಘಾಲೋ ಭವೇದೇವ ಗುರುರಾಜಪ್ರಸಾದತಃ || ೨೫ ||

ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತಪ್ರೇತಪಿಶಾಚಾದಿಪೀಡಾ ತಸ್ಯ ನ ಜಾಯತೇ || ೨೬ ||

ಏತತ್ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃಂದಾವನಾಂತಿಕೇ |
ದೀಪಸಂಯೋಜನಾಜ್ಞಾನಂ ಪುತ್ರಲಾಭೋ ಭವೇದ್ಧ್ರುವಮ್ || ೨೭ ||

ಪರವಾದಿಜಯೋ ದಿವ್ಯಜ್ಞಾನಭಕ್ತ್ಯಾದಿವರ್ಧನಮ್ |
ಸರ್ವಾಭೀಷ್ಟಪ್ರವೃದ್ಧಿಸ್ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೮ ||

ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೨೯ ||

ಯೋ ಭಕ್ತ್ಯಾ ಗುರುರಾಘವೇಂದ್ರಚರಣದ್ವಂದ್ವಂ ಸ್ಮರನ್ ಯಃ ಪಠೇತ್ |
ಸ್ತೋತ್ರಂ ದಿವ್ಯಮಿದಂ ಸದಾ ನ ಹಿ ಭವೇತ್ತಸ್ಯಾಸುಖಂ ಕಿಂಚನ |

ಕಿಂ ತ್ವಿಷ್ಟಾರ್ಥಸಮೃದ್ಧಿರೇವ ಕಮಲಾನಾಥಪ್ರಸಾದೋದಯಾತ್ |
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ ಸಾಕ್ಷೀ ಹಯಾಸ್ಯೋಽತ್ರ ಹಿ || ೩೦ ||

ಇತಿ ಶ್ರೀ ರಾಘವೇಂದ್ರಾರ್ಯ ಗುರುರಾಜಪ್ರಸಾದತಃ |
ಕೃತಂ ಸ್ತೋತ್ರಮಿದಂ ಪುಣ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿದೈಃ || ೩೧ ||

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ೩೨ ||

ಆಪಾದಮೌಳಿಪರ್ಯಂತಂ ಗುರುಣಾಮಾಕೃತಿಂ ಸ್ಮರೇತ್ |
ತೇನ ವಿಘ್ನಃ ಪ್ರಣಶ್ಯಂತಿ ಸಿದ್ಧ್ಯಂತಿ ಚ ಮನೋರಥಾಃ || ೩೩ ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರ ಗುರವೇ ನಮೋಽತ್ಯಂತ ದಯಾಳವೇ || ೩೪ ||

ಮೂಕೋಽಪಿ ಯತ್ಪ್ರಸಾದೇನ ಮುಕುಂದಶಯನಾಯ ತೇ |
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ಇತಿ ಶ್ರೀ ಅಪ್ಪಣ್ಣಾಚಾರ್ಯವಿರಚಿತಂ ಶ್ರೀ ರಾಘವೇಂದ್ರ ಸ್ತೋತ್ರಂ ಸಂಪೂರ್ಣಮ್ ||

ರಾಯಬಾರೊ ತಂದೆತಾಯಿ ಬಾರೊ (ಶ್ರೀ ಜಗನ್ನಾಥ ದಾಸರು)

ರಾಗ – ಆನಂದಭೈರವಿ, ತಾಳ – ಏಕತಾಳ

ರಾಯಬಾರೊ ತಂದೆತಾಯಿ ಬಾರೊ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ || ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ || ||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ || ||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ || ||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ || ||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ || ||

ತೂಗಿರೆ ರಾಯರ ತೂಗಿರೆ ಗುರುಗಳ

ತೂಗಿರೆ ರಾಯರ ತೂಗಿರೆ ಗುರುಗಳ

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ ||||

ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ ||ಅಪ||

ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ ||||

ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ ||||

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ ||||

ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ ||||

Tugire rayara tugire gurugala
tugire yathikula thilakara
tugire yogeendra karakamala poojayara
tugire guru Raghavendrara ||

Kundana mayavada chamdada totiladolu
nandadi malagyara tugire
nandanakanda govinda mukundana
nandadi Bhajipara tugire ||1||

Yoganidreyanu begane maduva
Yoghisha Vandyara tugire
Bhogishayanana pada yogadi Bhajipara
Bhagavatharana tugire ||2||

Nemadi tananu kanipajanarige
kamita koduvavara tugire
premadi nijajanara aamayavanukoola
dhoomaketuvenipara tugire ||3||

Advaitha mathada vidvashana nijaguru
madhwamathodharana tugire
siddha sankalpadi baddha nijabhaktara
uddharamalpara tugire ||4||

Bhajaka janaru bhava trujana madisi avara
nijjagathiippara tugire
nijaguru jaganathavittalana padakanja
Bhajaneya malpara tugire ||5||

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)